
ಕಲಾಂಗಣ್ ಎಂದರೆ ಕಲೆಯ ಅಂಗಳ .....ಇಂತಹ ಒಂದು ಸುಂದರ ಸ್ಥಳ ಮಂಗಳೂರಿನ ಶಕ್ತಿನರಗದಲ್ಲಿ ಇದೆ. ಇಲ್ಲಿನ ೧ ಎಕರೆ ಪ್ರದೇಶದಲ್ಲಿ ಮೈ ದೆಳೆದು ನಿಂತಿರುವ ಈ ಭವ್ಯ ಕೇಂದ್ರ ಕೊಂಕಣಿ ಭಾಷೆ, ಸಂಸ್ಕ್ರತಿ ಮತ್ತು ಜಾನಪದ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವ ಕಾಯಕದಲ್ಲಿ ನಿರತವಾಗಿದೆ. ೧೯೮೬ ರಲ್ಲಿ ಎರಿಕ್ ಒಜಾರಿಯೋ ಅವರು ಆರಂಭಿಸಿದ ಮಾಂಡ್ ಸೊಭಾಣ್ ಕಾಲ ಕ್ರಮೇಣ ಒಂದು ಚಳವಳಿ ಆಗಿ ರೂಪುಗೊಂಡಿತ್ತು . ಅದರ ಫಲವೇ ಇದು. ನಾಡಿನಾದ್ಯಂತ ಇರುವ ೪೫ ಕೊಂಕಣಿ ಭಾಷಿಗರನ್ನು ಈ ಸಂಸ್ಥೆ ಪ್ರತಿನಿದಿಸುತಿದೆ ಎಂದರೆ ನಂಬುತೀರ..! ಕೊಂಕಣಿ ಭಾಷಾ ಬೆಳವಣಿಗೆಗೆ ಇದು ಕೂಡ ಒಂದು ಸ್ಪೂರ್ತಿ. .. ಕೊಂಕಣಿ ಭಾಷೆ ಕೇವಲ ಕ್ರೈಸ್ತರ ಮತ್ತು ಗೌಡ ಸಾರಸತ್ವ ಬ್ರಾಹಮಣ.. ಸಮುದಾಯದ ಭಾಷೆ ಎಂಬ ಭಾವನೆಯನ್ನು ತೊಡೆದು ಹಾಕಿ ಇತರ ಪಂಗಡಗಳ ನಡುವೆಯೂ ಅನುಷ್ಟಾನ ದಲ್ಲಿ ಇರುವುದನ್ನು ವಿಶ್ವಕ್ಕೆ ಮನವರಿಕೆ ಮಾಡಿ ಕೊಟ್ಟಿದೆ. ಇಲ್ಲಿ ಸುಂದರ ತೆರೆದ ರಂಗ ಮಂದಿರ, ವಸ್ತು ಸಂಗ್ರಹಾಲಯ, ಸಭಾಂಗಣ, ಕೊಂಕಣಿ ಪುಸ್ತಕ ಭಂಡಾರ, ಎಲ್ಲವು ವ್ಯವಸ್ಥಿತವಾಗಿ ಇದೆ. ಇಲ್ಲಿನ ಈ ವೇದಿಕೆ ಇದುವರೆಗೂ ೧೦೦೦ ಕ್ಕೂ ಅದಿಕ ಕಾರ್ಯಕ್ರಮಗಳನ್ನು ನಡೆಸಿದೆ. ಚಿಕ್ಕ ಮಕ್ಕಳಿಗೆ ಸಾಂಸ್ಕ್ರತಿಕ ಶಿಬಿರಗಳು, ನಾಟಕ ತರಬೇತಿ, ಸಂಗೀತ - ನ್ರತ್ಯ ತರಬೇತಿಗಳು, ಕೊಂಕಣಿ ಸಂಸ್ಕ್ರತಿಗೆ ಸಂಬಂದಿಸಿದ ಅಧ್ಯಯಾನ ಮತ್ತು ಸಂಶೋದನೆ ಇತ್ಯಾದಿ ...ಇದೆಲ್ಲದಕ್ಕೂ ಕೀರೀಟ ಪ್ರಾಯವಾಗಿ ೪೮ ಗಂಟೆಗಳ ಕೊಂಕಣಿ ನಿರಂತರಿ ಹಾಡುಗಾರಿಕೆ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಇದೇ ವೇದಿಕೆಯಲ್ಲಿ ಬರೆದಿದೆ. ಕಲಾಂಗಣ್ ಇನ್ನೂ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವ ಮುಖಾಂತರ ಕೊಂಕಣಿ ಭಾಷಿಕರ ಮದ್ಯೆ ಬೆಳೆಯಲಿ ಎಂದು ಹಾರೈಸೋಣ.....